ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನದಿಂದ ಭಾಷಾ ಉಳಿವು : ಕೃಷ್ಣಪ್ರಸಾದ ಅಡ್ಯಂತಾಯ

ಲೇಖಕರು : ಪ್ರಜಾವಾಣಿ
ಭಾನುವಾರ, ನವ೦ಬರ್ 8 , 2015
ನವ೦ಬರ್ 8, 2015

ಯಕ್ಷಗಾನದಿಂದ ಭಾಷಾ ಉಳಿವು : ಕೃಷ್ಣಪ್ರಸಾದ ಅಡ್ಯಂತಾಯ

ಬ್ರಹ್ಮಾವರ : ಕಲೆಯ ವೀಕ್ಷಣೆಗೆ ಸಂಖ್ಯಾಬಲ ಮುಖ್ಯವಲ್ಲ, ಆಸಕ್ತರು ಮುಖ್ಯ. ಭಾಷೆಯನ್ನು ಉಳಿಸುವ, ಪುರಾಣ ಕತೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಲೆ ಯಕ್ಷಗಾನ ಮಾತ್ರ ಎಂದು ಕೊಲ್ಲೂರು ದೇವಸ್ಥಾನದ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದರು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಕೊಮೆ ಯಶಸ್ವಿ ಕಲಾವೃಂದ, ತೆಕ್ಕಟ್ಟೆಯ ಚಂದ್ರಕಲಾ ಯಕ್ಷೋತ್ಸವ ಕ್ಷೇತ್ರೋತ್ಸವ ಕಾರ್ಯ ಕ್ರಮದಡಿ ಶುಕ್ರವಾರ ನಡೆದ ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-29ರ ದೇರಾಜೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಲಿಗ್ರಾಮ ಮಕ್ಕಳ ಮೇಳದ ರೂವಾರಿ ಶ್ರೀಧರ ಹಂದೆ ಮಾತನಾಡಿ, ಸಮಾಜ ಬೇಕು ಬೇಕು ಎನ್ನುವಾಗಲೇ ನಿವೃತ್ತವಾಗಬೇಕು, ದೇರಾಜೆ ಸಂಸ್ಮರಣೆ ನಿಜವಾಗಿಯೂ ಅರ್ಥಪೂರ್ಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕರಾವಳಿಯ ಜನತೆಗೆ ಮಾತು, ಭಾಷೆ, ಪುರಾಣ ಕಲಿಸಿಕೊಟ್ಟದ್ದು ಯಕ್ಷಗಾನ. ತಾಳಮದ್ದ ಲೆಯ ಶೈಲಿಯನ್ನು ಪಾಠದ ವಿಷಯದಲ್ಲಿ ಮಕ್ಕಳೊಂದಿಗೆ ಅಳವಡಿಸಿಕೊಂಡರೆ ಯಕ್ಷಗಾನದಿಂದ ವಿದ್ಯಾಕ್ಷೇತ್ರಕ್ಕೂ ದೊಡ್ಡ ಕೊಡುಗೆ ಸಿಗುವಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳ ನಾಟಕ ವಿನ್ಯಾಸಕಾರ ಹಾಗೂ ದೇರಾಜೆ ಅವರ ಸುಪುತ್ರ ಮೂರ್ತಿ ದೇರಾಜೆ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ತಾರಾನಾಥ ವರ್ಕಾಡಿ ದೇರಾಜೆ ಸಂಸ್ಮರಣಾ ಭಾಷಣ ಮಾಡಿದರು.

ಗಿಲಿಗಿಲಿ ಮ್ಯಾಜಿಕ್ ಸಂಸ್ಥೆಯ ರೂವಾರಿ ಪ್ರೊ.ಶಂಕರ್, ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ, ಕೋಟ ಸುದರ್ಶನ ಉರಾಳ ಉಪಸ್ಥಿತರಿದ್ದರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಕೈಲಾಸ ಕಲಾ ಕ್ಷೇತ್ರದ ಅಧ್ಯಕ್ಷ ಸೀತಾ ರಾಮ ಶೆಟ್ಟಿ ಕೊಕೂರು ವಂದಿಸಿದರು. ಚಂದ್ರಯ್ಯ ಆಚಾರ್ ಪ್ರಾರ್ಥಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸುಭದ್ರಾ ರಾಯಭಾರ ತಾಳಮದ್ದಲೆ ನಡೆಯಿತು. ಕಲಾವಿದರಾಗಿ ಕೆ.ಪಿ.ಹೆಗಡೆ, ಚಂದ್ರಯ್ಯ ಆಚಾರ್, ಕೂಡ್ಲಿ ದೇವದಾಸ ರಾವ್, ಕೃಷ್ಣಾನಂದ ಶಣೈ ಶಿರಿಯಾರ, ವಾಸುದೇವ ಸಾಮಗ, ವಾಸುದೇವ ರಂಗ ಭಟ್, ತಾರಾನಾಥ ವರ್ಕಾಡಿ, ಸುಜಯೀಂದ್ರ ಹಂದೆ ಮತ್ತು ಮಂಜು ನಾಥ ಕೆದ್ಲಾಯ ಭಾಗವಹಿಸಿದ್ದರು.

ಕೃಪೆ : prajavani

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ